Gmail ಪ್ರೋಗ್ರಾಮ್ ನೀತಿಗಳು

Gmail ಪ್ರೋಗ್ರಾಮ್‌ ನೀತಿಗಳು, ಅದನ್ನು ಬಳಸುವ ಎಲ್ಲರಿಗೂ ಸಕಾರಾತ್ಮಕವಾದ ಅನುಭವವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ನೀತಿಗಳಲ್ಲಿ ಆಗಾಗ ಮಾರ್ಪಾಡಾಗುವುದರಿಂದ, ಕಾಲಕಾಲಕ್ಕೆ ಇದನ್ನು ಪರಿಶೀಲಿಸಲು ಮರೆಯದಿರಿ. ಹೆಚ್ಚಿನ ಮಾತಿಗಾಗಿ ದಯವಿಟ್ಟು Google ನ ಸೇವಾ ನಿಯಮಗಳನ್ನು ಕೂಡಾ ನೋಡಿ.

ಸ್ಪ್ಯಾಮ್ ಮತ್ತು ದೊಡ್ಡ ಪ್ರಮಾಣದ ಮೇಲ್‌

ಇತರರಿಗೆ ಸ್ಪ್ಯಾಮ್ ಹಂಚಲು ಅಥವಾ ಅನಪೇಕ್ಷಿತ ವಾಣಿಜ್ಯ ಮೇಲ್‌ ಕಳುಹಿಸಲು Gmail ಅನ್ನು ಬಳಸಬೇಡಿ.

CAN-SPAM ಕಾಯ್ದೆ ಅಥವಾ ಇತರ ಸ್ಪ್ಯಾಮ್‌ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿ ಇಮೇಲ್‌ ಕಳುಹಿಸಲು; ಮುಕ್ತವಾಗಿ, ಥರ್ಡ್ ಪಾರ್ಟಿ ಸರ್ವರ್‌ಗಳ ಮೂಲಕ ಅನಧಿಕೃತ ಮೇಲ್ ಕಳುಹಿಸಲು; ಅಥವಾ ಯಾವುದೇ ವ್ಯಕ್ತಿಯ ಸಮ್ಮತಿ ಇಲ್ಲದೆಯೇ ಅವರ ಇಮೇಲ್‌ ವಿಳಾಸಗಳನ್ನು ವಿತರಿಸಲು Gmail ಬಳಸುವುದಕ್ಕೆ ನಿಮಗೆ ಅನುಮತಿಸಲಾಗುವುದಿಲ್ಲ.

ಇಮೇಲ್‌ಗಳನ್ನು ಕಳುಹಿಸಲು, ಅಳಿಸಲು ಅಥವಾ ಫಿಲ್ಟರ್ ಮಾಡಲು, ಬಳಕೆದಾರರನ್ನು ವಂಚಿಸುವಂತೆ ಅಥವಾ ತಪ್ಪು ಮಾರ್ಗದರ್ಶನ ಮಾಡುವ ರೀತಿಯಲ್ಲಿ Gmail ಇಂಟರ್ಫೇಸ್ ಅನ್ನು ಸ್ವಯಂಚಾಲಿತವಾಗಿಸಲು ನಿಮಗೆ ಅನುಮತಿಸಲಾಗುವುದಿಲ್ಲ.

ನಿಮ್ಮ “ಅನಪೇಕ್ಷಿತ” ಅಥವಾ "ಅನಗತ್ಯ" ಮೇಲ್‌ನ ವ್ಯಾಖ್ಯಾನವು ನಿಮ್ಮ ಇಮೇಲ್ ಸ್ವೀಕೃತದಾರರ ಗ್ರಹಿಕೆಗೆ ಭಿನ್ನವಾಗಿರಬಹುದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ಈ ಮೊದಲು ನಿಮ್ಮಿಂದ ಇಮೇಲ್‌ಗಳನ್ನು ಸ್ವೀಕರಿಸಲು ಸ್ವೀಕೃತದಾರರು ಆಯ್ಕೆಗೊಂಡಿದ್ದರೂ ಕೂಡಾ, ದೊಡ್ಡ ಪ್ರಮಾಣದ ಸ್ವೀಕೃತದಾರರಿಗೆ ಇಮೇಲ್‌ ಕಳುಹಿಸುವಾಗ ಹೆಚ್ಚಿನ ಎಚ್ಚರಿಕೆ ಇರಲಿ. Gmail ಬಳಕೆದಾರರು ಇಮೇಲ್‌ಗಳನ್ನು ಸ್ಪ್ಯಾಮ್‌‌ ಎಂದು ಗುರುತಿಸಿದಾಗ, ಇದು ನಮ್ಮ ದುರುಪಯೋಗ ವಿರೋಧಿ ವ್ಯವಸ್ಥೆಯು ನೀವು ಭವಿಷ್ಯದಲ್ಲಿ ಕಳುಹಿಸುವ ಸಂದೇಶಗಳನ್ನು ಕೂಡ ಸ್ಪ್ಯಾಮ್ ವರ್ಗಕ್ಕೆ ಸೇರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಬಹು Gmail ಖಾತೆಗಳ ರಚನೆ ಮತ್ತು ಬಳಕೆ

Google ನೀತಿಗಳನ್ನು ದುರುಪಯೋಗ ಮಾಡಲು, Gmail ಖಾತೆಯ ಮಿತಿಗಳನ್ನು ಮೀರಲು, ಫಿಲ್ಟರ್‌ಗಳನ್ನು ವಂಚಿಸಲು ಅಥವಾ ನಿಮ್ಮ ಖಾತೆಯಲ್ಲಿನ ನಿರ್ಬಂಧಗಳನ್ನು ನಾಶಗೊಳಿಸಲು ಬಹು ಖಾತೆಗಳನ್ನು ರಚಿಸಬೇಡಿ ಅಥವಾ ಬಳಸಬೇಡಿ. (ಉದಾಹರಣೆಗೆ, ದುರುಪಯೋಗದ ಕಾರಣದಿಂದಾಗಿ ಬೇರೆ ಬಳಕೆದಾರರ ಮೂಲಕ ನೀವು ನಿರ್ಬಂಧಿಸಲ್ಪಟ್ಟಿದ್ದರೆ ಅಥವಾ ನಿಮ್ಮ Gmail ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ಅಂತಹುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಬದಲಿ ಖಾತೆಯನ್ನು ರಚಿಸಬೇಡಿ.)

Gmail ಖಾತೆಯನ್ನು ಸ್ವಯಂಚಾಲಿತವಾಗಿ ರಚಿಸಲು ನಿಮಗೆ ಅನುಮತಿ ಇರುವುದಿಲ್ಲ. ಅಂದರೆ ಖರೀದಿ, ಮಾರಾಟ, ಟ್ರೇಡ್‌ ಅಥವಾ ಇತರರಿಗೆ Gmail ಖಾತೆಗಳ ಮರು ಮಾರಾಟ ಮಾಡುವಂತಿಲ್ಲ.

ಮಾಲ್‌ವೇರ್‌

ವೈರಸ್‌ಗಳು, ಮಾಲ್‌ವೇರ್‌ಗಳು, ವರ್ಮ್‌ಗಳು, ದೋಷಗಳು, ಟ್ರೋಜನ್ ಹಾರ್ಸ್‌ಗಳು, ದೋಷಪೂರಿತ ಫೈಲ್‌ಗಳು ಅಥವಾ ವಂಚನೀಯ ಸ್ವಭಾವದ ಯಾವುದೇ ಇತರ ಐಟಂಗಳನ್ನು ಉದ್ದೇಶಪೂರ್ವಕವಾಗಿ ರವಾನಿಸಲು Gmail ಬಳಸಬೇಡಿ. ಹೆಚ್ಚುವರಿಯಾಗಿ, ನೆಟ್‌ವರ್ಕ್‌ಗಳು, ಸರ್ವರ್‌ಗಳ ಕಾರ್ಯಾಚರಣೆಯ ಮೂಲಕ ಹಾನಿಮಾಡುವ ಅಥವಾ ಹಸ್ತಕ್ಷೇಪ ಮಾಡುವ ಅಥವಾ Google ಅಥವಾ ಇತರರಿಗೆ ಸೇರಿದ ಇತರ ಮೂಲಸೌಕರ್ಯಗಳ ವಿಷಯವನ್ನು ವಿತರಿಸಬೇಡಿ.

ವಂಚನೆ, ಫಿಶಿಂಗ್ ಮತ್ತು ಇತರ ವಂಚನೀಯ ಸ್ವಭಾವಗಳು

ನೀವು ಬೇರೆ ಬಳಕೆದಾರರ ಸ್ಪಷ್ಟ ಅನುಮತಿ ಇಲ್ಲದೆಯೇ ಅವರ Gmail ಖಾತೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ. ಹುಸಿ ಸೋಗಿನಲ್ಲಿ ಮಾಹಿತಿ ಹಂಚಿಕೊಳ್ಳಲು ಇತರ ಬಳಕೆದಾರಿಗೆ ವಂಚಿಸಲು, ದಾರಿ ತಪ್ಪಿಸಲು ಅಥವಾ ಮೋಸಗೊಳಿಸಲು Gmail ಬಳಸಬೇಡಿ.

ಲಾಗಿನ್‌ ಮಾಹಿತಿ, ಪಾಸ್‌ವರ್ಡ್‌ಗಳು, ಹಣಕಾಸಿನ ವಿವರಗಳು ಅಥವಾ ಸರ್ಕಾರದ ಗುರುತಿನ ಸಂಖ್ಯೆಗಳಂತಹ ಬಳಕೆದಾರರ ಡೇಟಾ ಪಡೆದುಕೊಳ್ಳಲು ಪ್ರಯತ್ನಿಸಬೇಡಿ ಅಥವಾ ಇತರರಿಗೆ ವಂಚಿಸುವ ಹುನ್ನಾರದ ಭಾಗವಾಗಿ Gmail ಬಳಸಬೇಡಿ.

ಮಕ್ಕಳ ಸುರಕ್ಷತೆ

Google ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ನಿರ್ದಾಕ್ಷಿಣ್ಯ ನೀತಿಯನ್ನು ಹೊಂದಿದೆ. ಈ ರೀತಿಯ ವಿಷಯದ ಕುರಿತು ನಮಗೆ ತಿಳಿದುಬಂದರೆ, ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ ನಾವು ದೂರು ನೀಡುವುದು ಒಳಗೊಂಡಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಂತಹ ಚಟುವಟಿಕೆಯಲ್ಲಿ ತೊಡಗಿರುವ Google ಖಾತೆಗಳ ವಿರುದ್ಧ ವಜಾಗೊಳಿಸುವುದು ಸೇರಿದಂತೆ, ಶಿಸ್ತು ಕ್ರಮ ಕೈಗೊಳ್ಳಬಹುದು.

Google prohibits the grooming of children using Gmail, defined as a set of actions aimed at establishing a connection with a child to lower the child's inhibitions in preparation for sexual abuse, trafficking, or other exploitation.

If you believe a child is in danger of or has been subject to abuse, exploitation, or been trafficked, contact your local law enforcement immediately.

If you have already made a report to law enforcement and still need help, or you have concerns a child is being or was subjected to grooming using Gmail, you can report the behavior to Google using this form. Please remember that you can always block any person you do not want to be contacted by on Gmail.

ಹಕ್ಕುಸ್ವಾಮ್ಯ

ಕೃತಿಸ್ವಾಮ್ಯ ಕಾನೂನುಗಳನ್ನು ಗೌರವಿಸಿ. ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯ ಅಥವಾ ಇತರ ಮಾಲೀಕತ್ವದ ಹಕ್ಕುಗಳು ಸೇರಿದಂತೆ ಇತರರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಬೇಡಿ. ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯನ್ನು ಪ್ರೋತ್ಸಾಹಿಸಲು ಅಥವಾ ಇತರರನ್ನು ಪ್ರೇರೇಪಿಸಲು ಸಹ ನಿಮಗೆ ಅನುಮತಿಸಲಾಗುವುದಿಲ್ಲ. ನೀವು ಈ ಫಾರ್ಮ್‌ ಬಳಸಿಕೊಂಡು Google ಗೆ ಕೃತಿಸ್ವಾಮ್ಯ ಉಲ್ಲಂಘನೆಯ ವರದಿಯನ್ನು ಮಾಡಬಹುದು.

ಕಿರುಕುಳ

ಇತರರಿಗೆ ಕಿರುಕುಳ ನೀಡಲು, ಹೆದರಿಸಲು ಅಥವಾ ಬೆದರಿಸಲು Gmail ಬಳಸಬೇಡಿ. ಯಾರಾದರೂ ಈ ಉದ್ದೇಶಗಳಿಗೆ Gmail ಬಳಸುವುದು ಕಂಡುಬಂದರೆ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.

ಕಾನೂನುಬಾಹಿರ ಚಟುವಟಿಕೆ

ಕಾನೂನುಬದ್ಧವಾಗಿ ಇರಿಸಿ. ಪ್ರಚಾರಮಾಡಲು ಅಥವಾ ಸಂಘಟಿಸಲು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು Gmail ಬಳಸಬೇಡಿ.

ನೀತಿ ವಿಧಿಸುವಿಕೆ

ಈ ಫಾರ್ಮ್‌ ಬಳಸಿಕೊಂಡು ನೀವು ದುರುಪಯೋಗದ ಕುರಿತು ವರದಿ ಮಾಡಬಹುದು. ಈ ನೀತಿಗಳ ಉಲ್ಲಂಘನೆಯಲ್ಲಿ ತೊಡಗಿವೆ ಎಂಬುದಾಗಿ ಕಂಡುಬರುವ ಖಾತೆಗಳನ್ನು Google ನಿಷ್ಕ್ರಿಯಗೊಳಿಸಬಹುದು. ನಿಮ್ಮ ಖಾತೆಯು ನಿಷ್ಕ್ರಿಯಗೊಂಡರೆ, ಮತ್ತು ಅದು ತಪ್ಪಾಗಿ ಆಗಿರಬಹುದು ಎಂದು ನೀವು ಭಾವಿಸಿದರೆ, ದಯವಿಟ್ಟು ಈ ಪುಟದಲ್ಲಿ ಇರುವ ಸೂಚನೆಗಳನ್ನು ಅನುಸರಿಸಿ.